ಸಣ್ಣ ಜಾಜಿ ಹಬ್ಬಿ ಬೆಳೆಯುವ ಪೊದೆ ಬಗೆಯದು. ಗಟ್ಟಿಮುಟ್ಟಾಗಿ ಬೆಳೆಯುತ್ತದೆ. ಇದರ ಸಸ್ಯಶಾಸ್ತ್ರೀಯ ಹೆಸರು ಜಾಸ್ಮಿನಮ್ ಅಫಿಸಿನೇಲ್. ಇದು ಕಾಕಸಸ್ ಮತ್ತು ಏಷ್ಯಾದ ಭಾಗಗಳಿಗೆ ಸ್ಥಳೀಯವಾಗಿದೆ. ಬೇಸಿಗೆಯಲ್ಲಿ ಇದರ ಹೂವುಗಳ ತೀಕ್ಷ್ಣ ಪರಿಮಳಕ್ಕಾಗಿ ಸಮಶೀತೋಷ್ಣ ಭಾಗಗಳಾದ್ಯಂತ ತೋಟಗಾರರು ಇದಕ್ಕೆ ವಿಶೇಷವಾಗಿ ಪ್ರಾಮುಖ್ಯ ನೀಡುತ್ತಾರೆ. == ಗುಣಲಕ್ಷಣಗಳು == ಅಭಿಮುಖ ರೀತಿಯ ಏಕ ಪಿಚ್ಛಕ ಸಂಯುಕ್ತ ಎಲೆಗಳನ್ನು ಪಡೆದಿದೆ. ಪ್ರತಿ ಎಲೆಯಲ್ಲಿ 3-7 ಪತ್ರಕಗಳುಂಟು. ತುದಿಯ ಪತ್ರಕ ಉಳಿದವಕ್ಕಿಂತ ದೊಡ್ಡದು. ರೆಂಬೆಗಳ ಅಗ್ರಭಾಗದಲ್ಲಿ ಲಘು ಸಂಖ್ಯೆಯ ಹೂಗಳುಳ್ಳ ಸೀಮಾಕ್ಷಿ ಮಂಜರಿಗಳು ಮೂಡುವುವು. ಒಮ್ಮೊಮ್ಮೆ ಮಂಜರಿಯಲ್ಲಿ ಒಂದೇ ಹೂವಿರುವುದುಂಟು. ಹೂಗಳ ಬಣ್ಣ ಬಿಳಿ. ಪ್ರತಿ ಹೂವಿನಲ್ಲಿ 4-5 ದಳ ಅಷ್ಟೇ ಸಂಖ್ಯೆಯ ನಿದಳಗಳಿವೆ. ಹೂ ಅರಳುವ ಕಾಲ ಜುಲೈ-ಅಕ್ಟೋಬರ್, ಪರ್ಷಿಯ ಅಥವಾ ಕಾಶ್ಮೀರ ಇದರ ತವರು ಎನ್ನಲಾಗಿದೆ. == ಉಲ್ಲೇಖಗಳು ==